ಖಾನಯ್ಯ ಅಜ್ಜ ಮತ್ತು ಶಿವಮ್ಮ

ಸಿದ್ದಲಿಂಗಯ್ಯನವರ ಎರಡನೆಯ ಮಕ್ಕಳಾದ ಖಾನಯ್ಯನವರ ವಿವಾಹವು 'ಶಿವು' ರಂಬವರೊಡನೆ ಆಯಿತು. ಖಾನಯ್ಯ-ಶಿವಮ್ಮರ ಜೋಡಿ ಹಿರೇಮಠಕ್ಕೆ ಒಪ್ಪುವಂತಿತ್ತು ಖಾನಯ್ಯನವರಿಗೆ ಬರೀ ಶಿವಪೂಜೆ, ಕಂತೀಭಿಕ್ಷೆ, ಪಂಚಾಂಗ ಹೇಳುವುದು, ತಾಯತ-ಕರಿದಾರ ಕಟ್ಟುವುದು ಮುಂತಾದವುಗಳನ್ನು ಮಾಡುತ್ತಿರಬಾರದೆನಿಸಿತು. ಊರಿಗೆ, ಸಮಾಜಕ್ಕೆ ಒಳಿತಾಗುವಂಥ ಕಾರ್ಯ ಮಾಡಬೇಕು. ಜನರನ್ನು ಸನ್ಮಾರ್ಗದತ್ತ ಸಾಗಿಸಬೇಕು. ಸದಾಚಾರ, ಸತ್ಯನಿಷ್ಠೆ, ಭಕ್ತಿ ಭಾವಗಳನ್ನು ಬೆಳೆಸಬೇಕೆಂಬ ಆಲೋಚನೆಯುಳ್ಳವರಾದರು. ಅದಕ್ಕಾಗಿ ತಮ್ಮ ಹಿರಿಯರು ಸಾಗಿಸಿಕೊಂಡು ಬಂದ ಪುರಾಣ, ಪ್ರವಚನದಂಥ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ನಿರ್ಧಾರಕ್ಕೆ ಬಂದರು.

ಖಾನಯ್ಯನವರು ಹೆಚ್ಚು ಓದಿದವರಲ್ಲ. ವಿದ್ವಾಂಸರ ಸಂಪರ್ಕದೊಳಗಿದ್ದವರೂ ಆಗಿರಲಿಲ್ಲ. ಆದರೂ ಅವರಿಗೆ ಪುರಾಣ ಹೇಳುವ ಕಲೆ ದೈವದತ್ತವಾಗಿ ಒಲಿದು ಬಂದಿತು.ಅದರೊಂದಿಗೆ ಸಂಗೀತ-ಸಾಹಿತ್ಯ ಜ್ಞಾನ ಕೂಡಾ ಲಭಿಸಿತ್ತು. ಪ್ರತಿದಿನ ಬೆಳಗಿನಲ್ಲಿ ಶಿವಪೂಜೆಯ ನಂತರ ಅವರು ಹಾಡುತ್ತಿದ್ದ ಮಂಗಲಗೀತೆಯನ್ನು ಕೇಳಿದವರೇ ಧನ್ಯರು. ಅವರು ಎಷ್ಟೊಂದು ಭಾವ ಪರವಶರಾಗಿ ಹಾಡುತ್ತಿದ್ದರೆಂದರೆ ತಮ್ಮನ್ನು ತಾವೇ ಮೈಮರೆತು ಬಿಡುತ್ತಿದ್ದರು. ಮೊದಲಿಗೆ ಇವರು ಶ್ರೀದೇವಿ ಪುರಾಣವನ್ನು ನವರಾತ್ರಿ ಸಂದರ್ಭದಲ್ಲಿ ಹೇಳತೊಡಗಿದರು. ನಂತರದಲ್ಲಿ ಶರಣ ಬಸವೇಶ್ವರ ಮತ್ತಿತರ ಮಹಾತ್ಮರ ಪುರಾಣ ಹೇಳತೊಡಗಿದರು. ಹಿರೇಮಠದವರು ಬಳಗಾನೂರಿಗೆ ಹೋದಾಗ ಗೂಳರಡ್ಡಿಯವರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಈ ಸಂಪರ್ಕದಿಂದಾಗಿ ಹಿಂದೆ ಕೌದಿ ಮಹಾಂತಯ್ಯನವರು ಬಳಗಾನೂರಿನಲ್ಲಿ ಪುರಾಣ ಹೇಳಿದ್ದರು. ಈಗ ಖಾನಯ್ಯಜ್ಜನವರು ಕೂಡಾ ಬಳಗಾನೂರಿನಲ್ಲಿ ಶ್ರೀದೇವಿ ಪುರಾಣ, ಶರಣ ಬಸವೇಶ್ವರ ಪುರಾಣ ಹೇಳುವಂತಾದರು.ಖಾನಯ್ಯಜ್ಜನವರ ಬಹುದಿನದ ಪುರಾಣಪ್ರವಚನ ಫಲವಾಗಿ ಅವರಿಗೆ ಕವಿತಾರಚನಾಶಕ್ತಿ ಉದಯಿಸಿತು. ಅದರಿಂದಲಾಗಿ ಗದಗ ತಾಲೂಕಿನ ಹೊಸಳ್ಳಿಯಲ್ಲಾಗಿಹೋದ 775 ವರುಷಕಾಲ ಬಾಳಿದ ಬೂದೀ ಮಹಾಸ್ವಾಮಿಗಳವರ ಪುರಾಣವನ್ನು ರಚಿಸಿದರು. ತಮ್ಮ ಅನುಭವದ ಆಳದಿಂದ ರಚಿಸಿದ ಈ ಪುರಾಣ ಹೊಸಹಳ್ಳಿಯ ಬೂದೀಸ್ವಾಮಿಮಠದ ಶ್ರೀ ಪ್ರಭುಸ್ವಾಮಿಗಳವರಿಗೆ ಬಲು ಮೆಚ್ಚಿಕೆಯಾಯಿತು.

ಖಾನಯ್ಯಜ್ಜನವರ ಬಹುದಿನದ ಪುರಾಣಪ್ರವಚನ ಫಲವಾಗಿ ಅವರಿಗೆ ಕವಿತಾರಚನಾಶಕ್ತಿ ಉದಯಿಸಿತು. ಅದರಿಂದಲಾಗಿ ಗದಗ ತಾಲೂಕಿನ ಹೊಸಳ್ಳಿಯಲ್ಲಾಗಿಹೋದ 775 ವರುಷಕಾಲ ಬಾಳಿದ ಬೂದೀ ಮಹಾಸ್ವಾಮಿಗಳವರ ಪುರಾಣವನ್ನು ರಚಿಸಿದರು. ತಮ್ಮ ಅನುಭವದ ಆಳದಿಂದ ರಚಿಸಿದ ಈ ಪುರಾಣ ಹೊಸಹಳ್ಳಿಯ ಬೂದೀಸ್ವಾಮಿಮಠದ ಶ್ರೀ ಪ್ರಭುಸ್ವಾಮಿಗಳವರಿಗೆ ಬಲು ಮೆಚ್ಚಿಕೆಯಾಯಿತು.ಖಾನಯ್ಯಜ್ಜನವರ ಬದುಕಿನ ಹಿರಿಮೆಗೆ ಹಿನ್ನೆಲೆಯಾಗಿ ಅವರ ಕಾವ್ಯದಕ್ಷತೆಗೆ ಪ್ರೇರಣೆಯಾದವರು 'ಅರ್ಧಾಂಗಿನಿ', 'ಸಹಧರ್ಮಿಣಿ', 'ನಾರಿಗುಣಮಣಿ' ಎಂಬಿತ್ಯಾದಿ ಪದಗಳಿಗೆ ಪಾತ್ರರಾದವರು ಶಿವಮ್ಮನವರು. ಈ ದಂಪತಿಗಳ ಪುಣ್ಯ ಗರ್ಭದಿಂದ ಮಹಾಂತಯ್ಯ, ಚನವೀರಯ್ಯ, ಶಾಂತಯ್ಯರೆಂಬ ಮೂವರು ವರಪುತ್ರರು ಜನಿಸಿದರು. ಹಾಲಮ್ಮ, ಗೌರಮ್ಮ, ಕೊಟ್ರಮ್ಮ, ಶ್ಯಾವಂತ್ರೆಮ್ಮರೆಂಬ ನಾಲ್ವರು ಪುತ್ರಿಯರು ಜನಿಸಿದರು. ಈ ಮಕ್ಕಳಿಂದಾಗಿ ಹಿರೇಮಠ ಸದಾನಕ್ಕು ನಲಿದಾಡತೊಡಗಿತು. ಬರಹೋಗುವವರ ಗದ್ದಲವೂ ಹೆಚ್ಚಾಯಿತು.


ಚನ್ನವೀರ ಶರಣರು

(ಜನನ ಜೂನ್ ೧೫, ೧೯೨೩ - ಲಿಂಗೈಕ್ಯ ಫೆಬ್ರವರಿ ೬, ೧೯೯೫)

ದಿನಾಂಕ 15-6-1923 ಶುಭ ಬೆಳಗಿನ ಸಮಯದಲ್ಲಿ ನಾಡಬೆಳಗಬಲ್ಲ 13P ಪುತ್ರರತ್ನವೊಂದು ಶಿವಮ್ಮನವರ ಗರ್ಭಮಂದಿರದಿಂದ ಉದಯಿಸಿತು. ಆ ವೇಳೆಗೆ ಸರಿಯಾಗಿ ಮಠದಲ್ಲೂ, ಊರಲ್ಲೂ ಮಿಂಚೊಂದು ಮಿಂಚಿದಂತಾಗಿ ಜನರಿಗೆ ಕೌತುಕ ಭರಿಸಿತು. ಶಿವಮ್ಮನವರ ಹೆರಿಗೆ ಅದೊಂದು ಸಾಮಾನ್ಯ ಹೆರಿಗೆಯಾಗಿರದೆ ಅವತಾರಿಕ ಪುರುಷರಾಗಮನದ ದ್ಯೋತಕವಾಗಿತ್ತು. ಶಿವಮ್ಮನವರಿಗೆ ತಮ್ಮ ಈ ಸಲದ ಹೆರಿಗೆ ಕೂಡಾ ವಿಶೇಷವಾಗಿರುವಂತೆ ಅನಿಸಿತು. ಅವರಿಗಾದ ಆನಂದಾನುಭವವನ್ನು ವರ್ಣಿಸಲಸದಳ.

ಚಂದ್ರಯ್ಯ ಮಗುವಿಗೆ ಊಟ-ಆಟ-ನಿದ್ರೆ-ವಿಶ್ರಾಂತಿಕ್ಕಿಂತ ಶಿವಪೂಜೆಯ ಬಗ್ಗೆ ಹೆಚ್ಚು ಒಲವುಂಟಾಗತೊಡಗಿತು. ಶಿವಧ್ಯಾನದ ಹಂಬಲ ಹೆಚ್ಚಿರುವುದನ್ನು ಕಾಣಬಹುದಾಗಿತ್ತು ಮನೆಯಿಂದ ಹೊರಹೋಗಿ ಎತ್ತೆತ್ತಲೋ ತಿರುಗಾಡತೊಡಗಿದ. ಜಗವನನ್ನು ಹುಡುಕಿ ಕರೆತರಬೇಕಾಗುತ್ತಿತ್ತು ಯಾವಾದಾದರೊಂದು ಗುಡಿ-ಗುಂಡಾರದಲ್ಲಿ ಹೋಗಿ ಕಣ್ಮುಚ್ಚಿ ಕುಳಿತು ಕೊಳ್ಳಿರುತ್ತಿದ್ದ. ಕೆಲವೊಮ್ಮೆ ಬಿಲ್ವವೃಕ್ಷದಡಿಯಲ್ಲಿ ಕುಳಿತುಕೊಂಡಿರುತ್ತಿದ್ದ.

ಶಿವಲಿಂಗ ಕಂಡಾಗಲಂತೂ ಭಾವುಕನಾಗಿ ಕೈಮುಗಿದು ಹೋಗುತ್ತಿದ್ದ. ಹಿರೇಮಠದ ಚಂದ್ರಯ್ಯನವರಲ್ಲಿ ಅದೆಂಥಾ ಭಕ್ತಿಯಿದೆ. ನಡೆನುಡಿ ಶುದ್ದಿಯಿದೆ. ಬಾಲ್ಯದಲ್ಲಿ ಇಂಥಹುವೆಲ್ಲ ಹೇಗೆ ರೂಢಿಗೊಂಡಿದೆ. ತಂದೆ ತಾಯಿಗಳ ಪುಣ್ಯವದು. ಇದು ಹೀಗೆಯೇ ಮುಂದೊರೆದರೆ ಈತನೊಬ್ಬ ಶಿವಯೋಗಿ ಸಾಮ್ರಾಟನಾಗುವುದರಲ್ಲಿ ಸಂದೇಹವಿಲ್ಲವೆಂದು ಜನರು ಮಾತನಾಡಿಕೊಳ್ಳುತ್ತಿದ್ದರು.


ಶ್ರೀ ಶಿವಶಾಂತವೀರ ಶರಣರು

ಜನನ ಜೂನ್ 1, 1972 | ಅಧಿಕಾರ ಏಪ್ರಿಲ್ 26, 1985

1-6- 1972 ಚಿಕೇನ ಕೊಪ್ಪದ ಹಿರೇಮಠದ ಮಹಾಂತಯ್ಯ ಹಾಗೂ ದ್ರಕ್ಷಾಯಣಮ್ಮ ನವರಿಗೆ ಪುತ್ರರಾಗಿ ದಿನಾಂಕ್ 1-6-1972ರಂದು ಜನಿಸಿದ ಶಿಶುವಿಗೆ ಶಿವ ಶಾಂತವೀರಯ್ಯ ಎಂದು ನಾಮಕರಣ ಮಾಡಿದರು ಬಾಲ್ಯದಿಂದಲೂ ಶಿವನಿಷ್ಠೆ ಕ್ರಿಯಾಶೀಲ ಚೈತನ್ಯ ಹೊಂದಿದ ಮಗು ಭವಿಷ್ಯದಲ್ಲಿ ಮಹಾಸಾಧನೆಯನ್ನು ಕಂಡುಕೊಂಡ ಪೂಜ್ಯ ಚನ್ನವೀರ ಶರಣರು ಕೊಪ್ಪಳದ ಗವಿಮಠದಲ್ಲಿ ಅಧ್ಯಯನಕ್ಕಾಗಿ ಸೇರಿಸಿದರು ಗವಿಮಠದಲ್ಲಿ ವೇದಾಂತ ವಚನ ಅಧ್ಯಯನ ಯೋಗ ಜಪತಪ ಅನುಷ್ಠಾನ ಗೈದ ಶಿವಶಾಂತವೀರಯ್ಯನವರನ್ನು ಬಳಗಾರ ತಂದು 26-4-1985 ರಂದು ಬಳಗಾನೂರ ಮಠದ ಪಿಠಾಧಿಕಾರಿಗಳನ್ನಾಗಿ ನಾಡಿನ ಹರ ಗುರು ಚರಮೂರ್ತಿಗಳ ಜಗದ್ಗುರುಗಳ ಹಾಗೂ ನಾಡಿನ  ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಶಿವ ಶಾಂತವೀರ ಶರಣರು ಎಂಬ ಅಭಿದಾನದಿಂದ ಶ್ರೀಮಠದ ಸೇವಾ ದೀಕ್ಷೆ ಪಡೆದರು.