ಪ್ರಸ್ತುತ ನಡೆಯುತ್ತಿರುವ ಯೋಜನೆಗಳು

ಶಿಲಾ ಮಂಟಪ

ಕಲ್ಲಿನ ಮಂಟಪ ಬರೀ ಕಟ್ಟಡವಲ್ಲ ಭಕ್ತರ ದುಗುಡವನ್ನು ದೂರಮಾಡಿ ಶಾಂತಿನೀಡುವ ಶಾಂತಿಧಾಮ.ಈ ಶಿಲಾ ಮಂದಿರವ ಸುತ್ತಲಿರುವ ದೈವಿಕ ಶುದ್ಧತೆ-ಶಾಂತಿ ಮತ್ತು ಉಪಸ್ಥಿತಿಯನ್ನು ಅಂತರಿಕಗೊಳಿಸಲು ಸಹಾಯಮಾಡುತ್ತದೆ. ಮಂದಿರವು ಬರೀ ಭೌತಿಕವಾದ ಕಟ್ಟಡವಲ್ಲ ಪರಮ ಶಾಂತಿಯ ಸ್ಥಳವಾಗಿದೆ.ಮಹಾಮಹಿಮರನ್ನು ಅರಿತುಕೊಳ್ಳಲು, ಮಹಾಮಹಿಮರು ತಪಸ್ಸು ಮಾಡಿದ ಸ್ಥಳವಾಗಿದ್ದು ಇಲ್ಲಿ ಯುವಕರು ಮತ್ತು ಹಿರಿಯರು ಆಧ್ಯಾತ್ಮಿಕವಾಗಿ ಉನ್ನತಿಗೇರುವ ಮತ್ತು ಪೂರೈಸುವ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಆಂತರ್ಯ ಮೌನವನ್ನು ಅರಿಯುವ ಧ್ಯಾನ ಕೇಂದ್ರವಾಗಿದೆ. ಇದು ಭಕ್ತರ ಹೃದಯಗಳಲ್ಲಿ ಸಕಾರಾತ್ಮಕ ಕಂಪನಗಳನ್ನು ಉಂಟುಮಾಡುತ್ತದೆ.ಭಕ್ತರ ಮನಸ್ಸನ್ನು ಪುನಃಸ್ಚೇತನಗೊಳಿಸುವ ಭಕ್ತಿಮಂದಿರವಾಗಿದೆ.

ತರಗತಿ ಕೊಠಡಿಗಳು 

ತರಗತಿ ಕೊಠಡಿಗಳು ಮಹಾಮಹಿಮರ ಮಹದಾಸೆಯದಂತೆ ಗ್ರಾಮೀಣ ಭಾಗದಲ್ಲಿ ಬಡ ಹಾಗೂ ರೈತರ ಮಕ್ಕಳಿಗೆ ಉತ್ಕೃಷ್ಠ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಜ್ಞಾನದೇಗುಲದ  ಖನಿಜವಾಗಿ ಬೆಳೆಯುತ್ತಿರುವುದು.ಭವ್ಯ ಭಾರತದ ಭವಿಷ್ಯಕ್ಕೆ ಉತ್ತಮ ನಾಗರಿಕರನ್ನು ಶ್ರೀ ಮಠವು ಕೊಡುಗೆಯಾಗಿ ನೀಡುತ್ತಾಬಂದಿರುವ ಫಲವಾಗಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿದ್ದು ನೂತನ ಕೊಠಡಿಗಳ ನಿರ್ಮಾಣದ ಹಂತ.

ಟಾರ್ ರಸ್ತೆ

ಶ್ರೀಮಠದ ಪ್ರವೇಶ ದ್ವಾರದಿಂದ ಪ್ರಾರಂಭಗೊಂಡು ವಿದ್ಯಾಪೀಠದ ಮೈದಾನದ ಕೊನೆಯವರೆಗೆ ರಸ್ತೆಯನ್ನು ಡಾಂಬರೀಕರಣ ಗೊಳಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಮಳೆಗಾಲದಲ್ಲಿ ಭಕ್ತರಿಗೆ ಶಾಲಾ ಮಕ್ಕಳಿಗೆ ನಡೆದಾಡಲು ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ಹಾಗೂ ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ

ತೇರಿನ ಮನೆ

ಶೀಮಠದ ಮಹಾರಥೋತ್ಸವ ನಾಡಿನ ಗ್ರಾಮೀಣ ಪ್ರದೇಶದ ಬಹುದೊಡ್ಡ ಪ್ರಮಾಣದ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತಿ ಕಡಿಮೆ ಸಮಯದಲ್ಲಿ ಪೂಜ್ಯರ ಕತೃತ್ವ ಶಕ್ತಿ ಸಮಸ್ತ ಸದ್ಭಕ್ತರ ನಿಷ್ಕಲ್ಮಶ ಭಕ್ತಿಯ ಪ್ರತೀಕವಾಗಿ ವರ್ಣರಂಜಿತವಾಗಿ ಮಹಾರಥ ನಿರ್ಮಾಣಗೋಡಿದೆ. ಅದರ ನಿಲುಗಡವಾಗಿ ಶೀ ಮಠದ ಆವರಣದಲ್ಲಿ ಬಹು ಎತ್ತರದ ತೇರಿನ ಮನೆ ನಿರ್ಮಾಣಗೊಂಡು ಎಲ್ಲರನ್ನು ಆಕರ್ಷಿಸುತ್ತದೆ.

ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ

ಸ್ಥಾಪನೆಯ ವರ್ಷ - 2023

ಶ್ರೀ ಮಠದ ವಿದ್ಯಾ ಪೀಠವು ಪ್ರಾಥಮಿಕ ಪ್ರೌಢ ಹಾಗೂ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ವಿಚಾರಧಾರೆಯೊಂದಿಗೆ ಕುತೂಹಲ ಆಸಕ್ತಿ ಪ್ರಾಯೋಗಿಕ ತಿಳುವಳಿಕೆಯನ್ನು ಉಂಟು ಮಾಡುವ ಸುಸಜ್ಜಿತವಾದ ರಾಸಾಯನ ಭೌತಶಾಸ್ತ್ರ ಜೀವಶಾಸ್ತ್ರ ವಿಷಯಗಳ ಪಠ್ಯಕ್ಕೆ ಸಂಬಂಧಿಸಿದಂತೆ ಸುಸಜ್ಜಿತವಾದ ವಿಜ್ಞಾನ ಪ್ರಯೋಗಾಲಯ ಒಳಗೊಂಡಿದೆ.