ಶ್ರೀಗುರು ಕೃಪಾ ಕಟಾಕ್ಷ ಸಂಪಾದಿಸುವ ಅನುಗ್ರಹ ದೀಕ್ಷೆ ಎಂದರೆ ಅದೊಂದು ಹೊಸ ಹುಟ್ಟು ಪಡೆದಂತೆ. ಗುರು ಕರಕಮಲ ಸಂಜಾತರೆನಿಸಿಕೊಳ್ಳಬೇಕಾದರೆ ಗುರುಗಳೂ ಆಷ್ಟೇ ಸಮರ್ಥ ಶಾಲಿಗಳಾಗಿರಬೇಕು. ಶಿಷ್ಯನೂ ಕೂಡಾ ಅಷ್ಟೇ ಯೋಗ್ಯನಾಗಿರಬೇಕು. 'ಇಲ್ಲಿ ಮಾತ್ರ ಹಾಗೆಯೇ ಆಯಿತು. ಗುರುಗಳು ಶಿವಪೂಜಾನಿಷ್ಠರೂ, ಶಿವಯೋಗಸಿದ್ದರೂ, ಮಹಾತಪೋಧನರೂ, ಸಾತ್ವಿಕರೂ ಶಾಂತಮೂರ್ತಿಗಳೂ ಆಗಿದ್ದರು. ಇಂಥವರಿಂದ ಅನುಗ್ರಹ ಪಡೆದುಕೊಳ್ಳಲು ಬಂದ ಚಂದ್ರಯ್ಯನವರೂ ಕೂಡಾ ಅಷ್ಟೇ ಸಮರ್ಥಶಾಲಿ ಶಿವಾನುಭವಿ ಎನಿಸಿದ್ದರು. ಈ ಜೋಡಿಯು ಅನೇಕ ಹಿಂದಿನ ಶ್ರೇಷ್ಠತಮರಾದ ಗುರು ಶಿಷ್ಯರನ್ನು ಸ್ಮರಣೆಗೆ ತರುವಂತಾಯಿತು.ಗುರು ಮತ್ತು ಶಿಷ್ಯನನ್ನು ಸುತ್ತ ತೊಡಗಿದಂತೆನಿಸಿತು. ಗುರುಗಳು ಮಂದಸ್ಮಿತರಾಗಿದ್ದರು. ಶಿಷ್ಯ ನಡಗುತ್ತಿದ್ದ. ಆಗ ಗುರುಗಳು ಚನವೀರಯ್ಯ ಕಣ್ಣೆರೆದು ನೋಡು. ನಿನ್ನ ಹೃದಯದೇಗುಲವನ್ನೆಲ್ಲಾ ಝಾಲಾಡಿಸಿ ನೋಡಿದೆ. ಅಲ್ಲಿ ಶಿವಮಂತ್ರದೊಂದಿಗೆ ಗವಿಸಿದ್ದನ ಸ್ಮರಣೆ ಸದಾ ನಡೆದಿತ್ತು. ಮತ್ತೊಂದಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಸಾರ್ಥಕ್ಯವಾಯಿತು. ನಿನ್ನಂಥ ಶಿಷ್ಯ ದೊರೆತಿದ್ದು ನನ್ನ ಗುರುತನಕ್ಕೆ ಯೋಗ್ಯ ಶಿಷ್ಯ ದೊರೆತಿತು. "ಏಳು ಎದ್ದುನಿಲ್ಲು" ಎನ್ನುತ್ತಾ ತಾವೂ ಎದ್ದು ನಿಂತರು. ಚಂದ್ರಯ್ಯನವರಿಗೆ ಈ ರೀತಿ ಗುರೂಪದೇಶಗೈದರು. “ನೀನು ವೀರಶೈವ ಧರ್ಮಜ್ಯೋತಿ ಬೆಳಗಿಸುತ್ತಾ ಗವಿಮಠದ ಖ್ಯಾತಿ ಹೆಚ್ಚಿಸುವವನಾಗು. ನನ್ನೀ ಗುರುಮಂತ್ರ ಗುರೂಪದೇಶಸದಾ ನಿನಗೆ ಶ್ರೀರಕ್ಷೆಯಾಗಿ ಕಾಯುವುದು. ಗುರುನಾಮಸ್ಮರಣೆ, ಗುರುವಿನ ಸ್ಥಾನವನ್ನೆಂದಿಗೂ ಮರೆಯಬೇಡ. ಇಂದಿನಿಂದ ನೀನು ಚನ್ನವೀರಯ್ಯನಲ್ಲ. ಚನ್ನವೀರ ಶರಣನಾಗಿ ನಾಡಿನಲ್ಲೆಲ್ಲಾ ಮೆರೆ. ನೀನು ಸ್ವಾಮಿಯಲ್ಲ, ಸಂತನಲ್ಲ, ಆದೈತಿಯಲ್ಲ. ಆ ಎಲ್ಲವುಗಳ ಸಂಗಮ ಸ್ಥಳವೇ ನೀನು. ಎಲ್ಲರಿಗೂ ಪೂಜ್ಯವಾದ ಶರಣಸ್ಥಳ ನಿನ್ನದಾಗಲಿ. ಹನ್ನೆರಡನೇ ಶತಮಾನದಲ್ಲಾಗಿ ಹೋದ ಬಸವಾದಿ ಶರಣರ ಸಮಾಜೋದ್ದಾರ ಕಾರ್ ನನ್ನಿಂದ ನಡೆಯಲಿ. ಎಷ್ಟೇ ತ್ರಾಸಾದರೂ ಕೂಡಾ ನಿನ್ನ ಆಚಾರ-ಪೂಜಾಕ್ರಮ, ನಡಾವಳಿಗೆ ಚ್ಯುತಿ ತಂದುಕೊಳ್ಳಬೇಡ. ನೀ ಪಾಲಿಸಿಕೊಂಡು ಬಂದ ಬ್ರಹ್ಮಚರ್ಯವ್ರತ ಜೀವಾವಧಿ ಪಾಲಿಸಿಕೊಂಡು ಹೋಗು.ಎಂದು ಗುರೂಪದೇಶಗೈದರು.