ಚಿಕೇನಕೊಪ್ಪದ ಹಿರೇಮಠ ಹಿರಿಮೆ
ಚಿಕೇನಕೊಪ್ಪದ ಹಿರೇಮಠಕ್ಕೆ ಜಗದ್ಗುರು ಪಂಚಪೀಠಾಧೀಶರರುಗಳೆಲ್ಲರ ಕೃಪಾಶೀರ್ವಾದ ಸದಾ ದೊರೆಯುತ್ತಲಿದೆ. ಕೊಪ್ಪಳ ಗವಿಮಠ ಪೂಜ್ಯ ಶ್ರೀಗಳವರ, ಬಳ್ಳಾರಿ ಸಕ್ಕರಿ ಕರಡೀಶರವರ, ಎಮ್ಮಿಗನೂರಿನ ಜಡೆ ತಾತನವರ, ಕೋಡಿಕೊಪ್ಪದ ವೀರಪ್ಪಜ್ಜನವರು ಅಲ್ಲದೆ ಇನ್ನಿತರ ಅನೇಕ ಹರ-ಗುರು-ಚರಮೂರ್ತಿಗಳ ದಿವ್ಯಂತ: ಕರುಣ ದೈವದತ್ತ ಕೊಡುಗೆಯಂತೆ ದೊರೆಯುತ್ತ ಬಂದಿದೆ. ಅದಕ್ಕೆಂದೇ ಮಠದಲ್ಲಾಗಿ ಹೋದವರೆಲ್ಲಾ ಮಹಾಮಹಿಮರಾಗಿ ಬೆಳಗಿದರು. ಚಿತ್ರದುರ್ಗದ ಮಠಕ್ಕೆ ಶಲವಡಿಯ ಮಠಕ್ಕೆ ಈ ಹಿರೇಮಠದವರೇ ಪೀಠಾಧಿಕಾರಿಗಳಾಗಿ ಹೆಸರಾದರು.
ಸಿದ್ದಲಿಂಗಯ್ಯನವರು ವೀರವಿರಾಗಿಗಳಾಗಿ ಸ್ವಾತಂತ್ರ್ಯಹೋರಾಟಗಾರರಾಗಿ ಶಂಭುಲಿಂಗಾಶ್ರಮ ಜ್ಞಾಪಕರಾಗಿದ್ದವರು ಗುಗ್ಗಳ ಮಹಾಂತಪ್ರಜ್ಞನವರೂ ಕೂಡಾ ತಮ್ಮದೇ ಆದ ಪ್ರಭೆಯಿಂದ ಜನ-ಮನದಲ್ಲಿ ತಾಶ್ವತರಾಗಿ ಉಳಿದಿದ್ದಾರೆ. ಉಳಿದವರು ಸಂಸಾರಿಕರಾದರೂ ಸನ್ಮಾರ್ಗಿಗಳಾಗಿ ಸಾಧು ಸ್ವಭಾವದಿಂದ ಊರಿಗೆಲ್ಲ ಬೇಕಾದವರಾಗಿದ್ದರು. ಗತಿಸಿದ ಹಿರಿಯರ ಗದ್ದುಗಗಳೆಲ್ಲ ಮಠದಂಗಳದಲ್ಲಿದ್ದು ನಿತ್ಯ ಪೂಜೆಗೊಳ್ಳುತ್ತಲಿವೆ. ಲೌಕಿಕ ಮತ್ತು ಪಾರಮಾರ್ಥಿಕಗಳೆರಡನ್ನೂ ಸರಿಸಮಾನವಾಗಿ ಕಂಡುಂಡ ಗಮಗೆಯೊಳಡಗಿದ ಮಹಾತ್ಮರು ನಂಬಿದ ಭಕ್ತರಿಗೆ ಭಾವದಂತೆ ಫಲವನ್ನೀಯುತ್ತಿರುವರು. ಗಂಡು ಮಕ್ಕಳಷ್ಟೇ ಅಲ್ಲ, ಹೆಣ್ಣು ಮಕ್ಕಳೂ ಸಹಿತ ಶಿವಪೂಜಾ ನಿಷ್ಠರೂ, ಅಧ್ಯಾತ್ಮವಾದಿಗಳೂ ಆಗಿ ಭಕ್ತರ ಕಷ್ಟ-ಸುಖಗಳಲ್ಲಿ ಪಾಲುದಾರರಾಗಿರುತ್ತಿದ್ದರು.
ಸಿದ್ದಲಿಂಗಮ್ಮರ ಒಂದು ಘಟನೆ ಹಿರೇಮಠಕ್ಕೆ ಭೂಷಣಪ್ರಾಯವಾಗಿದೆ. ಒಂದು ವರ್ಷ ಆತೀ ದೃಷ್ಟಿಯಾಗಿ ಮಳೆಯ ಜಲಧಾರೆ ನಿಲ್ಲದಾಯಿತು. ಎಲ್ಲೆಲ್ಲೂ ನೀರೇ ನೀರಾಗಿ ಕೆರೆ ತುಂಬಿತು. ಕೆರೆಗೆ ಹರಿದು ಬರುವ ನೀರಿನ ಪ್ರವಾಹ ಹೆಚ್ಚಿದಾಗ ಅದರ ಒದ್ದು ಊರ ಕಡೆಗೆ ಕೊರದು ನೀರು ಹೊರ ಹೋಗತೊಡಗಿತು.
ಹಳ್ಳದೋಪಾದಿಯಲ್ಲಿ ರಭಸದಿಂದ ಹರಿದು ಬರುವ ನೀರು ಊರು ಹೊಕ್ಕು ಹಿರೇಮಠದ ಕಡೆಗೆ ಸಾಗಿತು. ಹಿರೇಮಠವು ನೀರಿನ ರಭಸಕ್ಕೆ ಉಳಿಯಲಾರದೆಂದು ಜನರು ಗಾಬರಿಸಿದರು. ಆದರೆ ಏನೂ ಮಾಡಲಿಕ್ಕೆ ಆಗದೆ ಐದೂ ಗದ್ದುಗೆಗಳಿಗೆ ನಮಿಸುತ್ತಾ 'ಐದೂ ಜನ ಹಿರೇರಾ, ಯಾಕ ಸುಮ್ಮಕ ಕುಂತಿರೋ ತೆಲಿಮ್ಯಾಲ ಕಲ್ಲು ಹೇರಿಕೊಂಡು, ನೋಡಿರಿಲ್ಲಿ ಗಂಗವ್ವನ ಮುನಿಸನ್ನು. ನಿಮ್ಮ ತಾಣಕ್ಕೆ ಬಂದಿರುವಳೋ ಅವಳನ್ನು ಬರಮಾಡಿಕೊಳ್ಳಿರೋ' ಎಂದು ಕ್ರೋಧದಿಂದ ಅಷ್ಟೇ ನಂಬುಗೆಯಿಂದ ನುಡಿದರು. ನೀರಿನ ಸಂಗ್ರಹ ಹೆಚ್ಚಾಗಿ ಮಠದ ಹೊಸ್ತಿಲಮಟ್ಟಕ್ಕೆ ಬಂದಿತು. ಇನ್ನೇನು ಹೊಸ್ತಿಲು ದಾಟಿ ಒಳ ಪ್ರವೇಶ ಮಾಡಬೇಕೆನ್ನುವಷ್ಟರಲ್ಲಿ ಗುಗ್ಗಳ ಮಹಾಂತಪ್ಪಜ್ಜನವರ ಗದ್ದುಗೆಯ ಮುಂಭಾಗದಲ್ಲಿ ಗಳಗಳ ಸದ್ದು ಮಾಡುತ್ತ ಇಳಿಯ ತೊಡಗಿತು. ಈ ಮೊದಲು ಗಮಗೆಯ ಸುತ್ತುಮುತ್ತ ಸಣ್ಣ ತೂತು ಸಹವಿರಲಿಲ್ಲ. ಈಗ ಹರಿದು ಬರುವ ನೀರೆಲ್ಲ ಅಲ್ಲಿಳಿದು ಒಳ ಸೇರಬೇಕಾದ ಸುಮಾರು ಅರ್ಧಭಾಗದಷ್ಟು ನೀರು ಹರಿದು ಬಂದು ಗದ್ದುಗೆ ಪಕ್ಕದಲ್ಲಿ ಇಂಗಿ ಹಿರೇಮಠವನ್ನೇನೂ ಮಾಡಲಿಲ್ಲ. ಇನ್ನಿತರರ ಮನೆಗಳೂ ರಕ್ಷಿತಗೊಂಡವು. ನೀರಿನ ಹರಿವು ಕಡಿಮೆಯಾದ ನಂತರ ಜನರು ಬಂದು ಬಂದು ನೋಡಿ ಆಶ್ಚರ್ಯಗೊಂಡರು. ಗುಗ್ಗಳ ಮಹಾಂತಪ್ಪಜ್ಜನವರ ಗದ್ದುಗೆ ಬದಿಯಲ್ಲಿ ಸಣ್ಣವಾದ ಬಿಲ ಕಾಣಿಸಿತು. ಆ ಬಿಲದ ಮುಖಾಂತರವಾಗಿ ಹರಿದು ಬಂದ ನೀರು ಒಳ ಸೇರಬೇಕಾದರೆ ಮಹಾಂತಪ್ಪಜ್ಜನವರ ಕರ್ತೃತ್ವ ಶಕ್ತಿಯೇ ಕಾರಣವಾಗಿದೆ ಎಂದು ಜನರೆಲ್ಲಾ ಗದ್ದುಗೆಗೆ ವಂದಿಸುತ್ತಾ ಸಿದ್ದಲಿಂಗಮ್ಮನವರಿಗೆ ಕೃತಜ್ಞತೆ ಸಲ್ಲಿಸುತ್ತಾ ಹೋದರು. ಈ ಘಟನೆ ಹಿರೇಮಠದವರ ಹಿರಿಮೆಗೆ ಸಾಕ್ಷಿಯಾಯಿತು.
ಕೊಪಣಾಚಲವೆಂದು ಪ್ರಸಿದ್ದಿಗೊಂಡಿದ್ದ ಕೊಪ್ಪಳನಾಡಿನಲ್ಲಿ ಗವಿಮಠವು ಮೊದಲಿನಿಂದಲೂ ಪ್ರಸಿದ್ದಿಗೊಂಡಿದೆ. ಕ್ರಿ.ಶ. 1086ರಲ್ಲಿಯ ಹೋಳಿ ಹಂಪಯ್ಯನ ಶಾಸನದಲ್ಲಿ ಈ ನಾಡಿನಲ್ಲಿ ಮೊಟ್ಟಮೊದಲಿನ ವೀರಶೈವ ಧರ್ಮದ ಬಗ್ಗೆ ಉಲ್ಲೇಖನವಿದೆ.ಕ್ರಿ.ಶ. ಮೂರನೇ ಶತಮಾನದಿಂದ ಕ್ರಿ.ಶ. 1530ರವರೆಗೆ ಕೊಪ್ಪಳವು ಜೈನ ಧರ್ಮದ ಪ್ರಮುಖ ಕೇಂದ್ರವಾಗಿದ್ದ ಬಗ್ಗೆ ತಿಳಿದು ಬರುತ್ತದೆ. ಗವಿಸಿದ್ದಮಠವು ದ್ರಾವಿಡ ಮೂಲ ಸಿದ್ದ ವೈದ್ಯರ ಸ್ಥಾನ ಇದಾಗಿರಬೇಕೆಂದು ಊಹಿಸಲಾಗಿದೆ. ಗವಿಯಲ್ಲಿದ್ದ ಸಿದ್ದರಿಂದಾಗಿಯೇ ಗವಿಸಿದ್ದಮಠವೆಂದು ಹೆಸರಾಗಿದೆ. ಸಿದ್ದವೈದ್ಯ ಪರಂಪರೆಯಲ್ಲಿ ಈ ಮಠದ ಜಗದ್ಗುರುಗಳೆಲ್ಲರೂ ಆಯುರ್ವೇದ ಶಾಸ್ತ್ರದಲ್ಲಿ ಪರಿಣಿತರಾಗಿರುವರು. ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದಲ್ಲಿ ಆಗ ಪೀಠಾಧಿಕಾರಿಗಳಾಗಿದ್ದ ಪೂಜ್ಯಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರು ಅಧ್ಯಾತ್ಮ ವಿದ್ಯಾಪ್ರವೀಣರು ಆಯುರ್ವೇದ ಪಂಡಿತರೂ ಆಗಿದ್ದ 16ನೆಯ ಪೀಠಾಧಿಕಾರಿಗಳವರಾಗಿದ್ದ ಪೂಜ್ಯಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರಿದ್ದರು. ಇವರು ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಅನುಕೂಲತೆ ಮಾಡಿಕೊಟ್ಟಿದ್ದರು. ಲಿಂಗಪೂಜಾಸಕ್ತರೂ ಆಗಿದ್ದ ಇವರ ಸನ್ನಿಧಿಗೆ ಅನೇಕ ಊರವರೆಲ್ಲಾ ಸೇರಿ ಚಂದ್ರಯ್ಯನವರನ್ನು ಕರೆದುಕೊಂಡುಬಂದರು.
'ಗವಿಸಿದ್ದ ಈ ತನಕ ಸ್ಥಿರಲಿಂಗವಾಗಿದ್ದ. ಇನ್ನು ಈ ಚನ್ನವೀರ ಶರಣರ ರೂಪದಿಂದ ಚರಲಿಂಗವಾಗಿ ನಾಡಿನಲ್ಲೆಲ್ಲಾ ಮೆರೆಯುನೆಂದು ಗವಿಸಿದ್ದನೇ ಈತನ ಉಸಿರು. ಗವಿಸಿದ್ದನನ್ನು ನಂಬಿದ ಭಕ್ತರಿಗೆ ಒಳ್ಳೆಯದಾಗಲಿ ಈತನ ಕಾಯ-ಕಾಯಕಗಳೆರಡೂ ಗವಿಸಿದ್ದನಿಗರ್ಪಿತ ವಾದವು. ಗವಿಸಿದ್ದನ ನಾಮಾಮೃತ ಪಾನ ಮಾಡುತ್ತ ಇನ್ನು ನಾಡ ಸಂಚಾರಕ್ಕೆ ಹೊರಡು, ಶರಣರಲ್ಲಿ ಶ್ರೇಷ್ಠ ಶರಣ ನೀನು, ಬ್ರಹ್ಮಚಾರಿ ಶರಣ ನೀನು. ವೈರಾಗ್ಯದ ಶರಣ ನೀನು. ನಮ್ಮ ಶಿಷ್ಯ ಬಳಗದಲ್ಲಿಯೇ ಮಿಗಿಲಾದ ಜಂಗಮ ಶರಣ ನೀನು ಎಂದು ಮತ್ತೊಮ್ಮೆ ಚನ್ನವೀರ ಶರಣರನ್ನು ಹರಸಿದರು. ಗುರುಮೂರ್ತಿಗಳು. ನಂತರ ಬಂದವರಿಗೆಲ್ಲರಿಗೂ ಆಶೀರ್ವಾದ ಕರುಣಿಸುತ್ತಾ ಪ್ರಸಾದಕ್ಕೆ ಅಪ್ಪಣೆಯಿತ್ತರು.
ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠ
ಸಿದ್ದಲಿಂಗಯ್ಯನವರು ವೀರವಿರಾಗಿಗಳಾಗಿ ಸ್ವಾತಂತ್ರ್ಯಹೋರಾಟಗಾರರಾಗಿ ಶಂಭುಲಿಂಗಾಶ್ರಮ ಜ್ಞಾಪಕರಾಗಿದ್ದವರು ಗುಗ್ಗಳ ಮಹಾಂತಪ್ರಜ್ಞನವರೂ ಕೂಡಾ ತಮ್ಮದೇ ಆದ ಪ್ರಭೆಯಿಂದ ಜನ-ಮನದಲ್ಲಿ ತಾಶ್ವತರಾಗಿ ಉಳಿದಿದ್ದಾರೆ. ಉಳಿದವರು ಸಂಸಾರಿಕರಾದರೂ ಸನ್ಮಾರ್ಗಿಗಳಾಗಿ ಸಾಧು ಸ್ವಭಾವದಿಂದ ಊರಿಗೆಲ್ಲ ಬೇಕಾದವರಾಗಿದ್ದರು.
ಗತಿಸಿದ ಹಿರಿಯರ ಗದ್ದುಗಗಳೆಲ್ಲ ಮಠದಂಗಳದಲ್ಲಿದ್ದು ನಿತ್ಯ ಪೂಜೆಗೊಳ್ಳುತ್ತಲಿವೆ. ಲೌಕಿಕ ಮತ್ತು ಪಾರಮಾರ್ಥಿಕಗಳೆರಡನ್ನೂ ಸರಿಸಮಾನವಾಗಿ ಕಂಡುಂಡ ಗಮಗೆಯೊಳಡಗಿದ ಮಹಾತ್ಮರು ನಂಬಿದ ಭಕ್ತರಿಗೆ ಭಾವದಂತೆ ಫಲವನ್ನೀಯುತ್ತಿರುವರು. ಗಂಡು ಮಕ್ಕಳಷ್ಟೇ ಅಲ್ಲ, ಹೆಣ್ಣು ಮಕ್ಕಳೂ ಸಹಿತ ಶಿವಪೂಜಾ ನಿಷ್ಠರೂ, ಅಧ್ಯಾತ್ಮವಾದಿಗಳೂ ಆಗಿ ಭಕ್ತರ ಕಷ್ಟ-ಸುಖಗಳಲ್ಲಿ ಪಾಲುದಾರರಾಗಿರುತ್ತಿದ್ದರು.
ಸಿದ್ದಲಿಂಗಮ್ಮರ ಒಂದು ಘಟನೆ ಹಿರೇಮಠಕ್ಕೆ ಭೂಷಣಪ್ರಾಯವಾಗಿದೆ. ಒಂದು ವರ್ಷ ಆತೀ ದೃಷ್ಟಿಯಾಗಿ ಮಳೆಯ ಜಲಧಾರೆ ನಿಲ್ಲದಾಯಿತು. ಎಲ್ಲೆಲ್ಲೂ ನೀರೇ ನೀರಾಗಿ ಕೆರೆ ತುಂಬಿತು. ಕೆರೆಗೆ ಹರಿದು ಬರುವ ನೀರಿನ ಪ್ರವಾಹ ಹೆಚ್ಚಿದಾಗ ಅದರ ಒದ್ದು ಊರ ಕಡೆಗೆ ಕೊರದು ನೀರು ಹೊರ ಹೋಗತೊಡಗಿತು.