ಸ್ವಯಂಸೇವಕರಾಗಿ

ಜಾಗೃತಿ ಮೂಡಿಸಿ

ದೇಣಿಗೆ ಸಲ್ಲಿಸಿ

ಮುಂಬರುವ ಬೆಳವಣಿಗೆಗಳು

ಗೋಶಾಲೆ

ನಮ್ಮ ಗೋಶಾಲೆಯು ಸಾವಯವ ಗೊಬ್ಬರ, ಜೈವಿಕ ಅನಿಲ ಮತ್ತು ಆಯುರ್ವೇದ ಔಷಧಿಗಳನ್ನು ಉತ್ಪಾದಿಸುವ ಮೂಲಕ, ಸುಸ್ಥಿರ ಕೃಷಿ ಮತ್ತು ಆರೋಗ್ಯವನ್ನು ಉತ್ತೇಜಿಸುವ ಮೂಲಕ ಹಸುಗಳು ಮತ್ತು ಅವುಗಳ ಉಪ ಉತ್ಪನ್ನಗಳನ್ನು ಸಾಮಾಜಿಕ ಕಲ್ಯಾಣಕ್ಕಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ನಾವು ಆಚರಣೆಗಳು ಮತ್ತು ಸಮುದಾಯ ಕಾರ್ಯಕ್ರಮಗಳಿಗಾಗಿ ಡೈರಿ ಉತ್ಪನ್ನಗಳನ್ನು ವಿತರಿಸಲು, ಹಸುವಿನ ಆರೈಕೆಯ ಬಗ್ಗೆ ಶಿಕ್ಷಣ ನೀಡಲು ಮತ್ತು ಬಡ ಕುಟುಂಬಗಳಿಗೆ ಉಚಿತ ಊಟ ಮತ್ತು ಹಾಲನ್ನು ನೀಡುವ ಮೂಲಕ ಬೆಂಬಲಿಸಲು ಯೋಜಿಸಿದ್ದೇವೆ.

ವೃದ್ಧಾಶ್ರಮ ಮತ್ತುಅನಾಥಾಶ್ರಮ

ಸಮಾಜದಲ್ಲಿ ಕುಟುಂಬದ ಅನುಕೂಲದಿಂದ ವಂಚಿತರಾದ ಆಶ್ರಯವಿಲ್ಲದೆ ಅನಾಥರಾದ ವಯೋ ವೃದ್ಧರಿಗೆ ಹಿರಿಯ ನಾಗರಿಕರಿಗೆ ಶ್ರೀಮಠದಲ್ಲಿ ಆಶ್ರಯವಿತ್ತು ಆರೋಗ್ಯ ಅನ್ನದಾನ ಆರೋಗ್ಯ ಸಂರಕ್ಷಣೆ ನೀಡುವ ಅದುದ್ದೇಶದಿಂದ ವೃದ್ಧಾಶ್ರಮ ಸ್ಥಾಪಿಸುವ ಯೋಜನೆಯನ್ನು ಯೋಜಿಸಲಾಗಿದೆ.

ಶಿಲಾ ಮಂಟಪ

ಕಲ್ಲಿನ ಮಂಟಪ ಬರೀ ಕಟ್ಟಡವಲ್ಲ ಭಕ್ತರ ದುಗುಡವನ್ನು ದೂರಮಾಡಿ ಶಾಂತಿನೀಡುವ ಶಾಂತಿಧಾಮ.ಈ ಶಿಲಾ ಮಂದಿರವ ಸುತ್ತಲಿರುವ ದೈವಿಕ ಶುದ್ಧತೆ-ಶಾಂತಿ ಮತ್ತು ಉಪಸ್ಥಿತಿಯನ್ನು ಅಂತರಿಕಗೊಳಿಸಲು ಸಹಾಯಮಾಡುತ್ತದೆ.

ತರಗತಿ ಕೊಠಡಿಗಳು

ತರಗತಿ ಕೊಠಡಿಗಳು ಮಹಾಮಹಿಮರ ಮಹದಾಸೆಯದಂತೆ ಗ್ರಾಮೀಣ ಭಾಗದಲ್ಲಿ ಬಡ ಹಾಗೂ ರೈತರ ಮಕ್ಕಳಿಗೆ ಉತ್ಕೃಷ್ಠ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಜ್ಞಾನದೇಗುಲದ ಖನಿಜವಾಗಿ ಬೆಳೆಯುತ್ತಿರುವುದು.

ಪ್ರಯೋಗಾಲಯ

ಶ್ರೀ ಮಠದ ವಿದ್ಯಾ ಪೀಠವು ಪ್ರಾಥಮಿಕ ಪ್ರೌಢ ಹಾಗೂ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ವಿಚಾರಧಾರೆಯೊಂದಿಗೆ ಕುತೂಹಲ ಆಸಕ್ತಿ ಪ್ರಾಯೋಗಿಕ ತಿಳುವಳಿಕೆಯನ್ನು ಉಂಟು ಮಾಡುವುದು.

ಮುಂಬರುವ ಕಾರ್ಯಕ್ರಮಗಳು

00
days
00
hours
00
minutes
00
seconds

ಜಾತ್ರಾ ಮಹೋತ್ಸವ

ಪೂಜ್ಯಶ್ರೀ ಚನ್ನವೀರ ಶರಣರ ಸ್ಮರಣೋತ್ಸವವು 06-02-1996 ರಿಂದ ಪ್ರಾರಂಭಗೊಂಡು 2025 ನೇ ಇಸ್ವಿಯಲ್ಲಿ 30ನೇ ಸ್ವರ್ಣೋತ್ಸವವನ್ನು ಆಚರಿಸಲಾಗುತ್ತಿದೆ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಲಿಂಗ ದೀಕ್ಷೆ ಅಯಾಚಾರ ಸರ್ವಧರ್ಮ ಸಾಮೂಹಿಕ ವಿವಾಹ ಧರ್ಮ ಚಿಂತನ ಸಭೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಶರಣ ಶ್ರೀ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಜಾತ್ರಾ ಮಹೋತ್ಸವದ ಅಂಗವಾಗಿ ಜನಪದ ಜಾತ್ರೆ ಸಾಂಸ್ಕೃತಿಕ ಸೌರಭ ಜಾನುವಾರಗಳ ಜಾತ್ರೆ, ದೇಶಿ ಕ್ರೀಡೆಗಳಾದ ಕುಸ್ತಿ ಕಬಡ್ಡಿ ನಾಟಕೋತ್ಸವ ಸಂಗೀತೋತ್ಸವ ಹಾಸ್ಯ ಸಂಜೆ ಪುಸ್ತಕ ಬಿಡುಗಡೆ ಶರಣ ಸಾಂಸ್ಕೃತಿ ಹಾಗೂ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳು ಜರಗುತ್ತವೆ.

ಜನಸಂಪರ್ಕ ಮತ್ತು ಜಾಗೃತಿ ಕಾರ್ಯಕ್ರಮಗಳು

ಅಂಧರ ಆಶ್ರಮ

ಶರಣರಿಗೆ ಅಂಗಹೀನರು, ಅಂಧ ಮಕ್ಕಳನ್ನು ಕಂಡರೆ ಮಮತೆ ವಾತ್ಸಲ್ಯ ಉಕ್ಕುತ್ತಿತ್ತು.ಅಂಧ ಕಲಾವಿದರ ಕಾಠ್ಯಕ್ರಮದಲ್ಲಿದ್ದಾಗಲಂತೂ ಸಾಕಷ್ಟು ಕಾಣಿಕೆ ಸಂಗ್ರಹಿಸಿಕೊಡುತ್ತಿದ್ದರು

ದಾಸೋಹ

ಅನ್ನ ಅಕ್ಷಯ, ಆಶ್ರಯ, ಅರಿವುಗಳನ್ನು ಶ್ರೀ ಮಠದಲ್ಲಿ ನೀಡುವದರ ಮೂಲಕ ಬಡ ಮಕ್ಕಳಿಗಾಗಿ ಪ್ರಸಾದ ನಿಲಯ ಪ್ರಾರಂಭಿಸಿ ತನ್ಮೂಲಕ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದರು.ಅ